ಮನೆ ಮತ್ತು ಜಗತ್ತು-2023, Issue 4
ಜುಲೈ 24, 2023 - ವಾರ 29
ಮಿಲಾನ್ ಕುಂದೆರಾ
·
ಈ ವಾರ ತೀರಿಕೊಂಡ ಮಿಲಾನ್ ಕುಂದೆರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ೧೯೭೫ ರಿಂದ ಫ್ರಾನ್ಸ್ ನಲ್ಲಿ ನೆಲೆಸಿದ್ದ ಕುಂದೆರಾ ಎರಡನೇ ಜಾಗತಿಕ ಯುದ್ಧದ ನಂತರದಲ್ಲಿ ತನ್ನ ದೇಶಕ್ಕೆ ಮತ್ತು ತನಗೆ ವೈಯಕ್ತಿಕವಾಗಿ ಆದದ್ದರ ಅನುಭವದಲ್ಲಿ ರಚಿಸಿದ ಕೃತಿಗಳು ಖಾಸಗಿ ಜೀವನದ ಸೂಕ್ಷ್ಮಗಳ ಜೊತೆಗೇ ರಾಜಕೀಯದ ವಿಪರೀತಗಳು ತಳುಕು ಹಾಕಿಕೊಂಡಿರುವುದನ್ನು ಕಟ್ಟಿಕೊಡುವ ಪರಿ ಅದ್ಭುತ.
ಸುಗತ ಶ್ರೀನಿವಾಸರಾಜು ಸಂದರ್ಶನ, ದಿ ಹಿಸ್ಟರಿ ಆಫ್ ಲಿಟರೇಚರ್ ಪಾಡ್ಕಾಸ್ಟ್, ಅಕ್ಕಿ ರಫ್ತಿನ ಮೇಲೆ ಭಾರತ ನಿಷೇಧ
ಮಾಧ್ಯಮ ಅನೇಕ - ಬಿಚ್ಚಿಟ್ಟ ಬುತ್ತಿ ತಂದೆ ಚಿ ಶ್ರೀನಿವಾಸರಾಜು ಅವರ ಮೂಲಕ ಬಾಲ್ಯದಿಂದಲೇ ಕನ್ನಡದ ಹಲವು ದಿಗ್ಗಜ ಸಾಹಿತಿಗಳ ಸಂಪರ್ಕಕ್ಕೆ ಬಂದ ಸುಗತ ಅವರು ಈ ಸಂದರ್ಶನದಲ್ಲಿ ಎಂಬತ್ತು ತೊಂಬತ್ತರ ದಶಕದ ಬೆಂಗಳೂರು, ಇಂಗ್ಲೆಂಡಿನ ತಮ್ಮ ಶಿಕ್ಷಣದ ದಿನಗಳು, ಪತ್ರಿಕಾ ವೃತ್ತಿ, ಬರವಣಿಗೆ ಇತ್ಯಾದಿಗಳ ಬಗ್ಗೆ ಹಂಚಿಕೊಂಡಿದ್ದಾರೆ.