ಕನ್ನಡ ಸಾಹಿತ್ಯ ಲೋಕಕ್ಕೆ ಸುದೀರ್ಘ ಇತಿಹಾಸವಿರುವುದರ ಜೊತೆಗೇ ಇಪ್ಪತ್ತನೆಯ ಶತಮಾನದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದ ನಮ್ಮಲ್ಲಿಯೂ ಹಲವು ಬಗೆಯ ಪ್ರಯೋಗಗಳು ನಡೆದು ನಮ್ಮ ಸಾಹಿತ್ಯವೂ ಶ್ರೇಷ್ಟತೆಯ ಸಾಧನೆಯಲ್ಲಿ ಹಿಂದುಳಿದಿಲ್ಲ. ನನಗೆ ಅತ್ಯಂತ ಪ್ರಿಯವಾದದ್ದು ಕಾದಂಬರಿ ಪ್ರಕಾರ.
ಕನ್ನಡದಲ್ಲಿ ಹಲವಾರು ಉತ್ತಮ ಕಾದಂಬರಿಗಳು ಬಂದಿವೆ. ಇವು ನಾಡಿನ ಇತರ ಭಾಗಗಳ ಜನರ ಬದುಕಿನ ಶೈಲಿ, ರೂಢಿಗಳು ಇತ್ಯಾದಿಯನ್ನು ಅರಿಯುವ ಸಾಧನಗಳೂ ಹೌದು.
ನಾನು ಓದಿರುವ, ನನಗೆ ಮೆಚ್ಚಿಗೆಯಾದ ಕೆಲವು ಕನ್ನಡ ಕಾದಂಬರಿಗಳ ಪಟ್ಟಿ ಇಲ್ಲಿದೆ.

