📹13 Feb 2026 Vid: Immense Anti-Indian Hate, Visa Concerns in US (The Quint)
ಈ ಮಾತುಕತೆಯಲ್ಲಿ ಭಾರತೀಯ ಸಂಜಾತ ಅಮೆರಿಕನ್ ಪ್ರಜೆ ಶ್ರೀ ಶ್ರೀನಿವಾಸನ್ ಅವರು ಅಮೆರಿಕದಲ್ಲಿ ಭಾರತ ಮತ್ತು ಭಾರತೀಯರ ಬಗೆಗಿನ ದ್ವೇಷದ ಮನಸ್ಥಿತಿ ಯ ಬಗೆಗೆ ಹೇಳಿದ್ದಾರೆ.
📹 16 Feb 2026 Vid: AI Can Change the Lives of the Poorest | Vinod Khosla | Prannoy Roy (DeKoder)
2030 ರ ವೇಳೆಗೆ ಭಾರತದ ಬಡವರಿಗೆ ಉಚಿತ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುವಲ್ಲಿ AI ಸಹಕಾರಿಯಾಗಬಲ್ಲದು ಎಂದು ಖೋಸ್ಲಾ ಅವರು ಅಭಿಪ್ರಾಯಪಡುತ್ತಾರೆ. ಅವರು BPO ಮತ್ತು IT ಸೇವೆಗಳ ಉದ್ಯಮಗಳಲ್ಲಿ ಕ್ಷಿಪ್ರ ಕುಸಿತ ಆಗಬಹುದು ಎಂದು ಊಹಿಸುತ್ತಾರೆ.
📹 18 Feb 2026 Vid: NOT EVEN JAIL: Imran Khan’s Health with Greg Chappell (Cricket Et Al)
ಕೆಲವು ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು ಇಮ್ರಾನ್ ಖಾನ್ ಅವರ ಮಾನವ ಹಕ್ಕುಗಳ ಪರವಾಗಿ ಧ್ವನಿ ಎತ್ತಿರುವ ಸಂದರ್ಭದಲ್ಲಿ, ಈ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೆಗ್ ಚಾಪೆಲ್ ಜೊತೆ ನಡೆಸಿರುವ ಮಾತುಕತೆ. ಟೆಸ್ಟ್ ಕ್ರಿಕೆಟ್ ಬಗ್ಗೆ ಗ್ರೆಗ್ ರ ಮಾತುಗಳು ಆಸಕ್ತಿಕರವಾಗಿವೆ.
📹20 Feb 2026 Vid: War, Like Life, is Complex (The Wire)
ನಿರ್ದೇಶಕ ಶ್ರೀರಾಮ್ ರಾಘವನ್ 1971 ರ ನಾಯಕ ಅರುಣ್ ಖೇತರ್ಪಾಲ್ ಕುರಿತಾದ ‘ಇಕ್ಕಿಸ್’ ಚಿತ್ರದ ಕುರಿತು ಚರ್ಚಿಸಿದ್ದಾರೆ.
📹 21 Feb 2026 Vid: The Galgotias Mess-Up: When Hype Takes Over Substance (Straight Bat)
ನವದೆಹಲಿ AI ಶೃಂಗಸಭೆಯ “ಲಾಜಿಸ್ಟಿಕ್ ಅವ್ಯವಸ್ಥೆ”ಯ ಬಗ್ಗೆ ಸರ್ದೇಸಾಯಿ ಅವರು ಹೇಳುತ್ತಾರೆ. ರಾಜಕೀಯ ಘೋಷಣೆಗಳನ್ನು ಅರ್ಥಮಾಡಿಕೊಳ್ಳದೆ ರಾಜಕೀಯ ಪಕ್ಷ ಹೇಳಿಕೊಟ್ಟದ್ದನ್ನು ಹೇಳುವ ‘ಜೋಂಬಿಫೈಡ್’ ಜನರೇಶನ್ Z ಬಗ್ಗೆ ಎಚ್ಚರಿಸುತ್ತಾರೆ.
📢 18 Feb 2026 Pod: India’s Return to the Trade Game (Grand Tamasha)
ಏಕಕಾಲದಲ್ಲಿ, ಭಾರತವು EU ಮತ್ತು US ಅನ್ನು ಒಳಗೊಂಡಿರುವ ಒಪ್ಪಂದಗಳೊಂದಿಗೆ ಜಾಗತಿಕ ವ್ಯಾಪಾರ ಕ್ಷೇತ್ರವನ್ನು ಮರು-ಪ್ರವೇಶಿಸುತ್ತಿದೆ.
📢 19 Feb 2026 Pod: Does football suffer because of cricket? (In Focus)
ಭಾರತದಲ್ಲಿ ಒಂದೆಡೆ ಕ್ರಿಕೆಟ್ “ದೇವತೆ”ಯಂತಹ ಸ್ಥಾನಮಾನ ಹೊಂದಿದ್ದರೆ ಇನ್ನೊಂದೆಡೆ ಭಾರತೀಯ ಫುಟ್ಬಾಲ್ ಶೋಚನೀಯ ಸ್ಥಿತಿಯಲ್ಲಿ ಇರುವುದರ ಬಗೆಗೆ ಸಂವಾದ.
📜 16 Feb 2026 ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ... (ಪ್ರಜಾವಾಣಿ)
ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ “ಆಲೆಮನೆ” ಸಂಪ್ರದಾಯದ ಕುರಿತು ಲೇಖನ ಓದುವಾಗ ಬಾಲ್ಯದಲ್ಲಿ ನಮ್ಮ ಕುಟುಂಬದಲ್ಲೇ ಕಂಡಿದ್ದ ಆಲೆಮನೆಯ ಸಡಗರ ನೆನಪಿಗೆ ಬಂತು.