📹 10 Feb 2026 Video: A Huge Gain for America & No New Access to India (The Wire)
ಇಂಡೋ-ಯುಎಸ್ ವ್ಯಾಪಾರ ಮತ್ತು ಆರ್ಥಿಕ ಸಾರ್ವಭೌಮತ್ವ
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಅತ್ಯಂತ ವಿವಾದಾತ್ಮಕ ವ್ಯಾಪಾರ ಸಂಬಂಧದ ಬಗ್ಗೆ ‘ದಿ ವೈರ್’ ನಡೆಸಿದ ಸಂದರ್ಶನ.
ಇತ್ತೀಚಿನ ಮಧ್ಯಂತರ ವ್ಯಾಪಾರ ಒಪ್ಪಂದವು ಏಕಪಕ್ಷೀಯವಾಗಿದೆ ಎಂದು ಭಾರತ ಸರ್ಕಾರದಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಸುಭಾಷ್ ಚಂದ್ರ ವಾದಿಸುತ್ತಾರೆ. ಅಮೆರಿಕವು ಭಾರತೀಯ ಮಾರುಕಟ್ಟೆಗಳಿಗೆ ಶೂನ್ಯ ಸುಂಕದ ಪ್ರವೇಶವನ್ನು ಪಡೆಯುವಾಗ ಭಾರತವು 18% ಸುಂಕಗಳನ್ನು ಪಾವತಿಸಬೇಕಾಗಿರುವುದು ಒಪ್ಪುವಂತದ್ದಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.
ಭಾರತವು ಇಂಧನ, ರಕ್ಷಣೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಐದು ವರ್ಷಗಳಲ್ಲಿ $500 ಶತಕೋಟಿ ಮೌಲ್ಯದ US ಸರಕುಗಳನ್ನು ಖರೀದಿಸಲು ಬದ್ಧವಾಗಿದೆ ಎಂದು ವರದಿಯಾಗಿದೆ. ತೈಲ ಖರೀದಿಗೆ ಸಂಬಂಧಿಸಿದಂತೆ - ರಷ್ಯಾದಿಂದ ಭಾರತಕ್ಕೆ ಆಮದುಗಳನ್ನು ನಿರ್ಬಂಧಿಸಲು “ಮೇಲ್ವಿಚಾರಣಾ ವ್ಯವಸ್ಥೆ”ಗೆ ಒಪ್ಪುವುದು ಭಾರತದ ಸಾರ್ವಭೌಮ ಸ್ವಾಯತ್ತತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಸುಬಾಷ್ ಚಂದ್ರ ಗಾರ್ಗ್ ಪ್ರತಿಪಾದಿಸುತ್ತಾರೆ.
📢 12 Feb 2026 Pod: Sentimental Value - Joachim Trier’s different kind of meta- movie (MUBI podcast)
ಜೋಕಿಮ್ ಟ್ರೈಯರ್ ಅವರ “ಸೆಂಟಿಮೆಂಟಲ್ ವ್ಯಾಲ್ಯೂ” ಚಲನಚಿತ್ರದ ತಯಾರಿಕೆಯ ಹಿನ್ನೆಲೆ, ಅದರ ಥೀಮ್ಗಳು ಮತ್ತು “ಮೆಟಾ-ಮೂವಿ” ಸಂಪ್ರದಾಯದಲ್ಲಿ ಅದರ ಸ್ಥಾನವನ್ನು ಈ ಪಾಡ್ಕಾಸ್ಟ್ ನಲ್ಲಿ ಅವಲೋಕಿಸಲಾಗಿದೆ.
📢 11 Feb 2026 Pod: How India lost the neighborhood (Grand Tamasha)
ಈ ಸಂಚಿಕೆಯಲ್ಲಿ ಭಾರತವು “ತನ್ನ ನೆರೆಹೊರೆಯನ್ನು ಕಳೆದುಕೊಳ್ಳುತ್ತಿದೆ” ಎಂಬ ಅಭಿಪ್ರಾಯವು ಹಲವರಲ್ಲಿ ಮೂಡಲು ಕಾರಣಗಳನ್ನು ಪರಿಶೋಧಿಸಲಾಗಿದೆ. ನೆರೆಯ ರಾಷ್ಟ್ರಗಳಲ್ಲಿನ “ಇಂಡಿಯಾ ಔಟ್” ಚಳುವಳಿಗಳು ಮತ್ತು ದಕ್ಷಿಣ ಏಷ್ಯಾದಲ್ಲಿ ಚೀನಾದ ಕಾರ್ಯತಂತ್ರದ ವಿಸ್ತರಣೆಯನ್ನೂ ಚರ್ಚಿಸಲಾಗಿದೆ.
📜 11 Feb 2026 Article: Equity On Trial: When Accountability Is Called Persecution (Outlook magazine)
ಜಾತಿ, ಸಮಾನತೆ ಮತ್ತು ಸಾಂಸ್ಥಿಕ ಸುಧಾರಣೆ
ಭಾರತೀಯ ಕ್ಯಾಂಪಸ್ ಗಳಲ್ಲಿ ಜಾತಿ ತಾರತಮ್ಯವನ್ನು ನಿಗ್ರಹಿಸಲು ವಿನ್ಯಾಸಗೊಳಿಸಲಾದ ‘UGC (Promotion of Equity in Higher Education Institutions) Regulations, 2026 ‘ ಕುರಿತಾದ ಸಂಘರ್ಷವು ಈಗ ಒಂದು ಪ್ರಮುಖ ವಿಷಯವಾಗಿದೆ.
ಈ ಹಿಂದೆ ಜಾರಿಯಲ್ಲಿದ್ದ ಸಲಹಾ ಕಾರ್ಯವಿಧಾನಗಳು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳ ದಿನನಿತ್ಯದ ಅವಮಾನ ಮತ್ತು ಆತ್ಮಹತ್ಯೆಗಳನ್ನು ತಡೆಯಲು ವಿಫಲವಾದ ಕಾರಣ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ.
ಮೇಲ್ಜಾತಿ ಗುಂಪುಗಳು ನಿಯಮಾವಳಿಗಳನ್ನು ಪ್ರತಿಭಟಿಸಿ, ಈ ನಿಯಮಾವಳಿಗಳನ್ನು “ಬ್ಲಾಕ್ಮೇಲ್” ಮಾಡಲು ದುರುಪಯೋಗಪಡಿಸಿಕೊಳ್ಳಲಾಗುವುದು ಎಂಬ ಕಾರಣ ನೀಡಿ ಅವುಗಳ ಜಾರಿಗೆ ಕೋರ್ಟಿನಿಂದ ತಡೆಯಾಜ್ಞೆ ತಂದಿರುವುದನ್ನು ಲೇಖನದಲ್ಲಿ ವಿವರವಾಗಿ ವಿಮರ್ಶಿಸಲಾಗಿದೆ.
📜 12 Feb 2026 Article: Seeking Equity: UGC Norms Expose Cracks In The Caste Coalition (Outlook magazine)
ಚುನಾವಣಾ ರಾಜಕೀಯ ಮತ್ತು ಜಾತಿ ಒಕ್ಕೂಟಗಳು
ಯುಜಿಸಿ ವಿವಾದವು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಒಳಗೆ ಇರುವ ಗಮನಾರ್ಹವಾದ ಬಿರುಕುಗಳನ್ನು ಬಹಿರಂಗಪಡಿಸಿದೆ.
ಬಿಜೆಪಿಯ ಯಶಸ್ಸು ಮೇಲ್ಜಾತಿಗಳನ್ನು ಪ್ರಬಲವಲ್ಲದ OBC ಗಳು ಮತ್ತು ದಲಿತರೊಂದಿಗೆ ಒಂದುಗೂಡಿಸುವ ಕಾರ್ಯತಂತ್ರದ ಮೇಲೆ ಅವಲಂಬಿತವಾಗಿದೆ. ( ಇದನ್ನೂ ಓದಿ: ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ) UGC ಈಕ್ವಿಟಿ ನಿಯಮಗಳು ಅವರ ಈ “ಕಾರ್ಯತಂತ್ರ’‘ದ ಅಸ್ಪಷ್ಟತೆಯನ್ನು ದೂರಗೊಳಿಸಿ, ಪಕ್ಷದ ಪ್ರಮುಖ ಸವರ್ಣ ಮತದಾರರನ್ನು ಇತರರೊಂದಿಗೆ ನೇರವಾಗಿ ಎದುರಾಗಿಸುತ್ತವೆ. ಈ ನಿಯಮಗಳ ಘೋಷಣೆಯ ಸಮಯವನ್ನು ನೋಡಿದರೆ 2027 ರ ಯುಪಿ ಚುನಾವಣೆಗೆ ಮುಂಚಿತವಾಗಿ ಯೋಗಿ ಆದಿತ್ಯನಾಥ್ ಅವರಂತಹ ಪ್ರಾದೇಶಿಕ ನಾಯಕರ ನೆಲೆಯನ್ನು ಅಡ್ಡಿಪಡಿಸುವ ಕಾರ್ಯತಂತ್ರದ ಕ್ರಮವಾಗಿರಬಹುದು ಎಂಬ ಅಭಿಪ್ರಾಯ ಲೇಖನದಲ್ಲಿ ವ್ಯಕ್ತವಾಗುತ್ತದೆ.
📜 15 Feb 2026 Art: Nobody knows what would follow regime change in Iran – but what happened in 1979 offers some pointers (The Guardian)
ಸಾಮೂಹಿಕ ಪ್ರತಿಭಟನೆಗಳು ಮತ್ತು US ಒತ್ತಡದ ನಡುವೆ ಇರಾನ್ನಲ್ಲಿ ಆಡಳಿತ ಬದಲಾವಣೆಯ ಸಂಭಾವ್ಯತೆಯನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಇರಾನ್ ನಲ್ಲಿನ ಇಂದಿನ ಅಶಾಂತಿ ಮತ್ತು 1979 ರ ಕ್ರಾಂತಿಯ ನಡುವಿನ ಸಾಮ್ಯತೆಗಳನ್ನು ಗಮನಿಸುತ್ತಾ, ಒಂದು ವೇಳೆ ಈಗಿನ ಆಡಳಿತವು ಪತನವಾದರೂ ನಂತರದ ಪರಿಣಾಮವು ಹೆಚ್ಚು ಅನಿರೀಕ್ಷಿತವಾಗಿ ಉಳಿಯುತ್ತದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.