📹 6 Feb 2026 Vid: ಬರಗೂರು ರಾಮಚಂದ್ರಪ್ಪ ಸಂದರ್ಶನ (ಮಾಧ್ಯಮ ಅನೇಕ)
ಸಾಹಿತ್ಯ, ಸಿನಿಮಾ, ಸಂಸ್ಕೃತಿ ಸಂಘಟನೆ - ಹೀಗೆ ವಿವಿಧ ನೆಲೆಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ, ತಮ್ಮದೇ ವಿಶಿಷ್ಟ ಚಿಂತನೆ, ಮಾನವೀಯ ಮೌಲ್ಯ, ಕಾರ್ಯಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ ಸೌಜನ್ಯದ ನಡೆ, ನಿಷ್ಠುರ ನುಡಿಗಳ ವಿಶಿಷ್ಟ ವ್ಯಕ್ತಿತ್ವದ ಸಾಹಿತಿ, ಚಿತ್ರ ನಿರ್ದೇಶಕ-ನಿರ್ಮಾಪಕ, ಚಿಂತಕ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರ ಸಂದರ್ಶನ ‘ ಮಾಧ್ಯಮ ಅನೇಕ’ ಪ್ರಸ್ತುತ ಪಡಿಸುವ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದಲ್ಲಿ.
ಪ್ರೊಫೆಸರ್ ರಾಮಚಂದ್ರಪ್ಪ ಅವರು ಕೆಳ ಮಧ್ಯಮ ವರ್ಗದ ಬಾಲ್ಯದಿಂದ ಕರ್ನಾಟಕದಲ್ಲಿ “ಬಂಡಾಯ” (ಪ್ರತಿಭಟನೆ) ಸಾಹಿತ್ಯ ಚಳುವಳಿಯ ನಾಯಕರಾಗುವವರೆಗೆ ತಮ್ಮ ಪ್ರಯಾಣವನ್ನು ಗುರುತಿಸುತ್ತಾರೆ. ಶಿಕ್ಷಣವು ತಮ್ಮ ಐಡೆಂಟಿಟಿಯನ್ನು ಒದಗಿಸಿದ ಬಗ್ಗೆ ಹೇಳುತ್ತಾರೆ. ಸಾಹಿತ್ಯವು ಅಂಚಿನಲ್ಲಿರುವವರ ಬಗ್ಗೆ ಜವಾಬ್ದಾರಿಯನ್ನು ಹೊಂದಿರಬೇಕು ಎಂಬ ಅವರ ತತ್ವವನ್ನು ವಿವರಿಸುತ್ತಾರೆ. ಕನ್ನಡ ಭಾಷೆಯನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಬಳಸುವಾಗ ಬಾಹ್ಯ ಹೇರಿಕೆಗಳ ವಿರುದ್ಧ ಜಾಗರೂಕವಾಗಿರುವ ಅಗತ್ಯವನ್ನು ಅವರು ಒತ್ತಿಹೇಳುತ್ತಾರೆ.
📹 6 Feb 2026 Vid: Modi and Trump: Deal or Drama (South Central)
ಈ ಸಂಚಿಕೆಯಲ್ಲಿ ಪೂಜಾ ಪ್ರಸನ್ನ ಅವರು ಸ್ಮಿತಾ ಶರ್ಮಾ ಅವರೊಡನೆ ಇತ್ತೀಚಿನ ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸುತ್ತಾರೆ.ಒಪ್ಪಂದದ ಬಗೆಗಿನ ವರದಿಗಳಲ್ಲಿ ಪಾರದರ್ಶಕತೆಯ ಕೊರತೆಯನ್ನು ಟೀಕಿಸುತ್ತಾರೆ. ವ್ಯಾಪಾರ ಒಪ್ಪಂದದಲ್ಲಿ , ಭಾರತವು ತನ್ನ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಮೆರಿಕದ ಬೇಡಿಕೆಗಳಿಗೆ ಒಪ್ಪಿಕೊಂಡಿದೆಯೇ ಎಂದು ಪ್ರಶ್ನಿಸುತ್ತಾರೆ.
ಎರಡನೇ ಭಾಗದಲ್ಲಿ 30 ವರ್ಷಗಳ ನಿಷೇಧದ ನಂತರ ಕರ್ನಾಟಕದಲ್ಲಿ ವಿದ್ಯಾರ್ಥಿ ಚುನಾವಣೆಗಳ ಸಂಭಾವ್ಯ ಮರಳುವಿಕೆಯ ಸಾಧ್ಯತೆಯ ಬಗ್ಗೆ ಮಾತುಕತೆ ಇದೆ. ಹಿಂಸಾಚಾರದ ಸಾಧ್ಯತೆಯಿದೆಯೆಂದು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯನ್ನು ನಿಷೇಧಿಸುವ ಔಚಿತ್ಯದ ಪರಿಶೀಲನೆ ಈ ಸಂವಾದದಲ್ಲಿದೆ.
📹 5 Feb 2026 Vid: What triggered the Ind-US deal? (DeKoder)
ರಾಜತಾಂತ್ರಿಕರಾದ ಅರುಣ್ ಸಿಂಗ್ ಮತ್ತು ಕೆನ್ ಜಸ್ಟರ್ ಅವರು ಹೊಸದಾಗಿ ಘೋಷಿಸಲಾದ ಯುಎಸ್ - ಭಾರತ ವ್ಯಾಪಾರ ಒಪ್ಪಂದವನ್ನು ವಿಶ್ಲೇಷಿಸುತ್ತಾರೆ. ಒಪ್ಪಂದವು ಭಾರತದ ಮೇಲಿನ ಸುಂಕಗಳನ್ನು 18% ಕ್ಕೆ ಇಳಿಸುವುದು ಮತ್ತು ಮತ್ತು US ಜೊತೆಗಿನ ವ್ಯಾಪಾರದ ಮೊತ್ತವನ್ನು $500 ಶತಕೋಟಿಗೆ ಏರಿಸುವುದನ್ನು ಒಳಗೊಂಡಿದೆ. ಬದಲಾಗಿ ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಬೇಕು ಎಂದು ವರದಿಯಾಗಿದೆ. ವ್ಯಾಪಾರ ಒಪ್ಪಂದವು ಉಭಯ ದೇಶಗಳ “ವಿಶ್ವಾಸಾರ್ಹತೆಯ ಕೊರತೆ”ಯನ್ನು ಪರಿಹರಿಸುತ್ತದೆಯೇ ಹಾಗೂ ಅನಿರೀಕ್ಷಿತವಾದ US ಆಡಳಿತದ ಕ್ರಮಗಳ ವಿರುದ್ಧ ಭಾರತವು ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ನೆರವಾಗುತ್ತದೆಯೇ ಎಂದು ಅವರು ಚರ್ಚಿಸುತ್ತಾರೆ.
📢 4Feb 2026 Pod: Can the US salvage its relationship with India (Grand Tamasha)
ಈ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ಮಿಲನ್ ವೈಷ್ಣವ್ ಅವರ ಜೊತೆ ಮಾತುಕತೆಯಲ್ಲಿ ವಿದೇಶಾಂಗ ನೀತಿ ತಜ್ಞೆ ಲಿಸಾ ಕರ್ಟಿಸ್ ಅವರು ಯು.ಎಸ್-ಭಾರತ ಸಂಬಂಧಗಳ ಮೇಲೆ ಉಂಟಾಗಿರುವ ತೀವ್ರ ಒತ್ತಡವನ್ನು ಪರಿಶೀಲಿಸುತ್ತಾರೆ. ಬೆಳೆಯುತ್ತಿರುವ “ನಂಬಿಕೆಯ ಕೊರತೆ” ಮತ್ತು ಇಂಡೋ-ಪೆಸಿಫಿಕ್ ಶಕ್ತಿಯ ಸಮತೋಲನ ಛಿದ್ರವಾಗಬಹುದಾದ ಸಂಭವನೀಯ ದೀರ್ಘಾವಧಿಯ ಪರಿಣಾಮದ ಬಗೆಗೂ ಹೇಳುತ್ತಾರೆ.
📜 3 Feb 2026 Art: ಇಕ್ಕೀಸ್ : ಗೆದ್ದು ಸೋಲುವ ಆಟ (ಪ್ರಜಾವಾಣಿ)
ಪ್ರಜಾವಾಣಿಯಲ್ಲಿ ಪ್ರಕಟವಾದ ಈ ವಿಮರ್ಶೆಯು ‘ಇಕ್ಕೀಸ್‘ ಚಲನಚಿತ್ರವನ್ನು ಕಲಾಕೃತಿಯಾಗಿ ಹೈಲೈಟ್ ಮಾಡುತ್ತದೆ, ಈ ಚಿತ್ರವು ಜಿಂಗೊಯಿಸಂಗೆ ಬದಲಾಗಿ ಯುದ್ಧದ ವಿನಾಶಕಾರಿ ಪರಿಣಾಮಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುವುದನ್ನು ಗುರುತಿಸುತ್ತದೆ. ಚಲನಚಿತ್ರವನ್ನು ರಾಷ್ಟ್ರೀಯ ಗಡಿಗಳನ್ನು ಮೀರಿದ ಮಾನವ ಸಂಬಂಧಗಳ ಕಥೆ ಎಂದು ವಿವರಿಸುತ್ತದೆ. ಚಿತ್ರವು ನೈತಿಕ ಸ್ಪಷ್ಟತೆ ಮತ್ತು ಸಂಯಮದಿಂದ ನಿರೂಪಿಸಲ್ಪಟ್ಟಿರುವುದನ್ನು ವಿಮರ್ಶೆಯು ಉಲ್ಲೇಖಿಸುತ್ತದೆ. .
📢 3 Feb 2026 Pod: Is your social life missing something? (The Ezra Klein Show)
ಎಜ್ರಾ ಕ್ಲೈನ್ ಮತ್ತು ಪ್ರಿಯಾ ಪಾರ್ಕರ್ ಅವರು ಉತ್ತಮವಾದ ಸಾಮಾಜಿಕ ಸಂಬಂಧಗಳನ್ನು ಹೊಂದುವ ಅಗತ್ಯ ಮತ್ತು ವ್ಯತ್ಯಾಸಗಳ ನಡುವೆಯೂ ಅರ್ಥಪೂರ್ಣ ಸಮುದಾಯವನ್ನು ನಿರ್ಮಿಸುವುದರ ಬಗ್ಗೆ ಚರ್ಚಿಸುತ್ತಾರೆ. ಆಧುನಿಕತೆ ತರುವ ಒಂಟಿತನ ಮತ್ತು ರಾಜಕೀಯ ಧ್ರುವೀಕರಣಕ್ಕೆ ಪ್ರತಿಯಾಗಿ ಆಗಾಗ ಸಾಮಾಜಿಕವಾಗಿ ಕಲೆಯುವುದು ಅಗತ್ಯ ಎಂದು ಅವರು ವಾದಿಸುತ್ತಾರೆ. ಗುಂಪುಗಳನ್ನು ಆರಂಭಿಸುವುದು, ಒಂದು ಕಡೆ ಸೇರಿಕೊಂಡು ಕಾಲ ಕಳೆಯುವುದು, ಅವನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಲು ಬದ್ಧರಾಗಿರುವುದರ ಅಗತ್ಯವನ್ನು ಪಾರ್ಕರ್ ಅವರು ವಿವರಿಸುತ್ತಾರೆ. ಈ ವಿಷಯದ ಬಗ್ಗೆ ಪಾರ್ಕರ್ ಅವರ ಪುಸ್ತಕ The Art of Gathering ಪ್ರಕಟವಾಗಿದೆ.
📜 3 Feb 2026 Art: War, a Trump-imposed deal or internal regime collapse: for Tehran, none of the options are good (The Guardian)
ಇರಾನ್ ಈಗ ದೇಶೀಯ ಆಡಳಿತದ ನ್ಯಾಯಸಮ್ಮತತೆಯ ಕೊರತೆ ಮತ್ತು ಬಾಹ್ಯ ಬೆದರಿಕೆಯ ಅಭೂತಪೂರ್ವ ಏಕಕಾಲಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸನಮ್ ವಕಿಲ್ ವಾದಿಸುತ್ತಾರೆ. ಜನವರಿಯಲ್ಲಿ ಪ್ರದರ್ಶನಕಾರರ ಮೇಲೆ ಆಡಳಿತವು ನಡೆಸಿದ ತೀವುಬಲ ಪ್ರಯೋಗದಿಂದ 6000 ಜನರು ಹತರಾಗಿರಬಹುದೆಂದು ಅವರು ಅಂದಾಜಿಸುತ್ತಾರೆ. ಇಸ್ಲಾಮಿಕ್ ರಾಜ್ಯದ ಆಡಳಿತದವರ ಭಯ ಪ್ರತಿಭಟನಾಕಾರರಲ್ಲಿ ಇಲ್ಲವಾಗಿದೆಯೆಂದು ಅಭಿಪ್ರಾಯಡುತ್ತಾರೆ. ಹಾಗೆಯೇ ಲೇಖನವು , ಇರಾನ್ ನ ಆಡಳಿತವು ಮೂರು ಬಗೆಯ ಅಪಾಯಗಳನ್ನು ಎದುರಾಗುವ ಸಾಧ್ಯತೆಗಳನ್ನು ವಿವರಿಸುತ್ತದೆ: ಪರಮಾಣು ಸಾಮರ್ಥ್ಯಗಳ ಮೇಲೆ ಬಲವಂತದ ರಾಜಿ, ಆಡಳಿತ ಬದಲಾವಣೆಯ ಗುರಿಯನ್ನು ಹೊಂದಿರುವ ನಿಯಂತ್ರಿತ ಯುದ್ಧ, ಅಥವಾ ಆಡಳಿತದ ನಿರ್ವಾತಕ್ಕೆ ಕಾರಣವಾಗುವ ಮತ್ತು ಈ ಪ್ರದೇಶದಲ್ಲಿ ಅನಿಶ್ಚತತೆಯನ್ನುಂಟುಮಾಡುವ ಅನಿಯಂತ್ರಿತ ದಾಳಿಗಳು.