ನಿಜವಾದ ಶಿಕ್ಷಣ
ಪ್ರಶ್ನಿಸಲು ಕಲಿಸದ್ದು ಶಿಕ್ಷಣವೇ? ಎಂಬ ಪ್ರಜಾವಾಣಿಯ ಲೇಖನದಲ್ಲಿ ಡಾ. ಜ್ಯೋತಿಯವರು ಇಂದಿನ ಒಂದು ದೊಡ್ಡ ಸಮಸ್ಯೆಯತ್ತ ಗಮನ ಸೆಳೆದಿದ್ದಾರೆ. ಅದೇನೆಂದರೆ, ವ್ಯವಸ್ಥೆಯನ್ನು ಅದರೆಲ್ಲಾ ಅಸಮರ್ಪಕತೆಗಳ ಜೊತೆಯೇ ಒಪ್ಪಿಕೊಂಡು ಪಾಲಿಸುವ ಪ್ರವೃತ್ತಿ. ಇದು ಇಡಿಯ ಸಮಾಜದ ಸಮಸ್ಯೆಯಾಗಿದ್ದರೂ ಈ ಸಮಸ್ಯೆಯ ಹುಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಪಾತ್ರವನ್ನು ಈ ಲೇಖನದಲ್ಲಿ ಶೋಧಿಸಲಾಗಿದೆ.
ಕರ್ನಾಟಕ ಸಂಗೀತದ ದಿಗ್ಗಜರು, ದಿ ಬುಕ್ ರೆವ್ಯೂ, AI ಮಾರುಕಟ್ಟೆಗಳು
ಕರ್ನಾಟಕ ಸಂಗೀತದ ದಿಗ್ಗಜರ ಕಲೆಯ ಅವಲೋಕನ ಸರಣಿ ನಾವು ನಿಜಕ್ಕೂ ಹೆಮ್ಮೆಪಡಬಹುದಾದ ನಮ್ಮ ಸಾಂಸ್ಕೃತಿಕ ಬಳುವಳಿಗಳಲ್ಲಿ ಶಾಸ್ತ್ರೀಯ ಸಂಗೀತವೂ ಒಂದು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಶ್ರೇಷ್ಟ ಸಾಧನೆ ಮಾಡಿರುವ ಸಂಗೀತಗಾರರ ಕುರಿತಾದ ವಿಶಿಷ್ಟ ಕಾರ್ಯಕ್ರಮವಿದು.
ಇಂಗ್ಲಿಷ್ ಪುಸ್ತಕಗಳು
ಇಂಗ್ಲಿಷ್ ಸಾಹಿತ್ಯ ಇತಿಹಾಸಕಾರ ವಿಲಿಯಂ ಹೆನ್ರಿ ಹಡ್ಸನ್ ‘ಒಂದು ದೇಶದ ಸಾಹಿತ್ಯ ಆ ದೇಶದ ಅತ್ಮಕತೆ ಇದ್ದಂತೆ, ಯಾಕಂದರೆ ಆ ದೇಶದಲ್ಲಿ ಆಗುತ್ತಿರುವುದನ್ನು ವೈಯಕ್ತಿಕ ಅನುಭವಗಳ ಮೂಲಕ ಕಟ್ಟಿ ಕೊಡುವುದು ಸಾಹಿತ್ಯದ ಮೂಲಕವೇ’ ಎಂದು ಹೇಳುತ್ತಾನೆ. ಹೀಗಾಗಿಯೇ ಬೇರೆ ಬೇರೆ ದೇಶಗಳ ಸಾಹಿತ್ಯ ಓದುವುದೆಂದರೆ ಆ ದೇಶಗಳ ಆತ್ಮಕತೆಯ ಭಾಗಗಳನ್ನೇ ಓದಿದಂತೆ.
