ಎಷ್ಟು ಕಷ್ಟವೋ ಹೊಂದಿಕೆ ಎಂಬುದು
·
ಕಳೆದ ವಾರ ವರದಿಯಾದ ಕೆಲವು ಹಿಂಸಾಚಾರದ ಘಟನೆಗಳು ಜಿ ಎಸ್ ಶಿವರುದ್ರಪ್ಪನವರ 'ಎಲ್ಲೋ ಹುಡುಕಿದೆ..' ಕವಿತೆಯನ್ನು ನೆನಪಿಸಿದವು. ದೂರದ ಅಮೆರಿಕೆಯಲ್ಲಿ ವಿಶ್ವ ವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದಾಗ ಹಂತಕನ ಗುಂಡಿಗೆ ಬಲಿಯಾದ ಬಲ-ಪಂಥೀಯ ಇನ್ಫ್ಲ್ಯೂಯೇನ್ಸರ್ ಚಾರ್ಲಿ ಕರ್ಕ್ ಸುದ್ದಿಯಾಗಲಿ, ಇಲ್ಲೇ ನಮ್ಮ ಹಳೇ ಮೈಸೂರು ಪ್ರಾಂತ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ನಡೆದ ಕೋಮು ಗಲಭೆಯ ಸುದ್ದಿಯಾಗಲಿ ಇವೆಲ್ಲ ಸೂಚಿಸುವುದು ಜನರಲ್ಲಿ ಹೆಚ್…