'ದಿ ಗರ್ಲ್ಫ್ರೆಂಡ್' - ಪ್ರೀತಿ ಮತ್ತು ಸ್ವಾಮ್ಯ
·
ಮೊನ್ನೆ ನೆಟ್ ಫ್ಲಿಕ್ಸ್ ನಲ್ಲಿ ‘ ದಿ ಗರ್ಲ್ ಫ್ರೆಂಡ್’ ‘ ತೆಲುಗು ಸಿನಿಮಾ ನೋಡುವಾಗ ವರ್ಷಗಳ ಹಿಂದೆ ಓದಿದ್ದ ರೇಮಂಡ್ ಕಾರ್ವರ್ ಕತೆ “ವಾಟ್ ವಿ ಟಾಕ್ ಅಬೌಟ್ ವೆನ್ ವಿ ಟಾಕ್ ಅಬೌಟ್ ಲವ್” ನೆನಪಾಯಿತು. ಈ ಚಿತ್ರ ಮತ್ತು ಆ ಕತೆ ಇವೆರಡು ಬಳಸುವ ನಿರೂಪಣಾ ತಂತ್ರ ವಿಭಿನ್ನವಾದರೂ ಎರಡರಲ್ಲೂ ಇರುವ ಒಂದು ಸಮಾನ ಸೆಲೆ ಏನೆಂದರೆ ರೊಮ್ಯಾಂಟಿಕ್ ಲವ್ ಅನ್ನು ಒಂದು ವಾಸ್ತವಿಕ ನೆಲೆಯಿಂದ ಶೋಧಿಸುವುದು.
