ಓಡುವುದರ ಬಗ್ಗೆ
·
ಮೊನ್ನೆ (ನವೆಂಬರ್ 22) ಚಿಕ್ಕಮಗಳೂರಿನಲ್ಲಿ ‘ ಮಲ್ನಾಡ್ ಅಲ್ಟ್ರಾ‘ ಮ್ಯಾರಥಾನ್ ಸ್ಪರ್ಧೆ ಇತ್ತು. 50 ಕಿಮೀ ಓಟದಲ್ಲಿ ಭಾಗವಹಿಸಿ ನಿಗದಿತ ಹತ್ತು ಗಂಟೆಗಳ ಒಳಗೆ ಮುಗಿಸಿದ್ದು ಒಂದು ಒಳ್ಳೆಯ ಅನುಭವವಾಗಿತ್ತು. ಚಿಕ್ಕಮಗಳೂರಿನ ಹಸಿರು ಗುಡ್ಡಗಳಲ್ಲಿರುವ ಕಾಫಿ ತೋಟಗಳ ಒಳಗೆ ಹೆಚ್ಚಿನ ಭಾಗ ಸಾಗುವ ಈ ಓಟದ ಒಂಬತ್ತನೆ ಆವೃತ್ತಿ ಈ ವರ್ಷದ ಓಟವಾಗಿತ್ತು. ಮೊದಲ ಎರಡನ್ನು ಬಿಟ್ಟರೆ ಉಳಿದ ಎಲ್ಲ ಆವೃತ್ತಿಗಳಲ್ಲಿ ಭಾಗವಹಿಸಿದ್ದೇನೆ.
