ಮನೆ ಮತ್ತು ಜಗತ್ತು-2023, Issue 16
ಅಕ್ಟೋಬರ್ 16, 2023 - ವಾರ 41
ಇಸ್ರೇಲ್-ಪ್ಯಾಲೆಸ್ಟೈನ್ಃ ನಿಲ್ಲದ ಹಿಂಸೆ
·
ಕಳೆದ ವಾರವಿಡೀ ಸುದ್ದಿಯಲ್ಲಿದ್ದು ಇನ್ನೂ ಸಹ ಯಾವುದೇ ತಾರ್ಕಿಕ ಅಂತ್ಯದ ಸಾಧ್ಯತೆ ಕಾಣಿಸುತ್ತಿಲ್ಲದ ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟು ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಸುಧೀಂದ್ರ ಬುಧ್ಯ ಅವರು ಪ್ರಜಾವಾಣಿಯಲ್ಲಿ ಬರೆದ “ಇಸ್ರೇಲ್ ಯುದ್ಧ ಅನಿರೀಕ್ಷಿತವೇ?” ಎಂಬ ಲೇಖನದಲ್ಲಿ ಸಧ್ಯದ ಈ ಘರ್ಷಣೆಯ ಹಿನ್ನೆಲೆಯ ಹಲವು ವಿವರಗಳನ್ನು ಒದಗಿಸುತ್ತದೆ.