📹17 Apr 2026 Vid: Is the Lack of Clarity About Delimitation Deliberate and Designed to Be Deceptive? (The Wire)
ತಮಿಳುನಾಡು ಸರ್ಕಾರದ ಸಚಿವ ಪಳನಿವೇಲ್ ತ್ಯಾಗರಾಜನ್ (ಪಿಟಿಆರ್) ಅವರೊಂದಿಗಿನ ಸಂದರ್ಶನದಲ್ಲಿ, ಪಿಟಿಆರ್ ಅವರು ಸರ್ಕಾರದ ಡಿಲಿಮಿಟೇಶನ್ ಬಿಲ್ಗಳಲ್ಲಿ ಸ್ಪಷ್ಟತೆಯ ಕೊರತೆ ಮತ್ತು ಸಂಭಾವ್ಯ ಸಂಚಿನ ಕುರಿತು ಮಾತನಾಡಿದ್ದಾರೆ. ಮತ್ತು “50% ಪ್ರಮಾಣಾನುಗುಣ ಹೆಚ್ಚಳ” ಕುರಿತ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಮೌಖಿಕ ಆಶ್ವಾಸನೆ ಮತ್ತು 2011 ರ ಜನಗಣತಿಯನ್ನು ಕಡ್ಡಾಯಗೊಳಿಸುವ ಮಸೂದೆಯ ಪಠ್ಯದ ನಡುವೆ ತೀವ್ರ ವಿರೋಧಾಭಾಸವಿದೆ ಎಂದು ವಾದಿಸುತ್ತಾರೆ. ಈ ವ್ಯತ್ಯಾಸವನ್ನು ಅವರು ಸಾರ್ವಜನಿಕರನ್ನು ಮತ್ತು ವಿರೋಧಪಕ್ಷಗಳನ್ನು ದಾರಿತಪ್ಪಿಸಲು ವಿನ್ಯಾಸಗೊಳಿಸಿದ “ಉಪಾಯ” ಎಂದು ನಿರೂಪಿಸುತ್ತಾರೆ.
📢 13 Apr 2026 Pod: The Real Reason Trump’s Blocking The Strait of Hormuz (The Rest Is Politics)
ಈ ಪಾಡ್ಕ್ಯಾಸ್ಟ್ ಸಂಚಿಕೆಯು ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ವಿಧಿಸಿದ ನೌಕಾ ದಿಗ್ಬಂಧನದ ಭೌಗೋಳಿಕ ರಾಜಕೀಯ ಪರಿಣಾಮಗಳನ್ನು ಮತ್ತು ಅಮೆರಿಕದಲ್ಲಿನ ದೇಶೀಯ ಪರಿಣಾಮಗಳನ್ನು ಶೋಧಿಸುತ್ತದೆ. ಆಂಥೋನಿ ಸ್ಕಾರಮುಚ್ಚಿ ಮತ್ತು ರಾಜತಾಂತ್ರಿಕ ರಿಚರ್ಡ್ ಹಾಸ್ ಅವರು ಈ ಕ್ರಮವು ಪರಿಣಾಮಕಾರಿ ಕಾರ್ಯತಂತ್ರವಾಗಿದೆಯೇ ಅಥವಾ ಯುಎಸ್ ಮತ್ತು ಚೀನಾವನ್ನು ಘರ್ಷಣೆಯ ಹಾದಿಗೆ ತಳ್ಳುತ್ತದೆಯೇ ಎಂದು ಚರ್ಚಿಸುತ್ತಾರೆ, ಅದೇ ಸಮಯದಲ್ಲಿ ಕ್ಯಾಥೋಲಿಕ್ ಮತದಾರರು ಟ್ರಂಪ್ ಅವರು ಪೋಪ್ ಅವರನ್ನು ಕುರಿತು ಮಾಡಿದ ಟೀಕೆಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಪರಿಶೀಲಿಸುತ್ತಾರೆ.
📢 14 Apr 2026 Pod: US-Iran war: Why did the Islamabad peace talks fail? (InFocus)
‘ ದಿ ಹಿಂದೂ’ ಪತ್ರಿಕೆಯ ವಿದೇಶಾಂಗ ವಿಭಾಗದ ಸಂಪಾದಕಿ ಸುಹಾಸಿನಿ ಹೈದರ್ ಅವರು US ಮತ್ತು ಇರಾನ್ ನಡುವೆ ಇಸ್ಲಾಮಾಬಾದ್ನಲ್ಲಿ 21 ಗಂಟೆಗಳ ಮಾತುಕತೆಗಳು ವಿಫಲವಾದದ್ದನ್ನು ವಿಶ್ಲೇಷಿಸುತ್ತಾರೆ. ಕದನ ವಿರಾಮವಕ್ಕೆ ಅಡ್ಡಿಯಾದ ಪ್ರಮುಖ ಅಂಶಗಳನ್ನು ಗುರುತಿಸುವುದರ ಜೊತೆಗೆ ಇರಾನಿನ ಬಂದರುಗಳನ್ನು ನಿರ್ಬಂಧಿಸುವ US ಪ್ರಯತ್ನದಿಂದ ಎದುರಾಗಬಹುದಾದ ಪರಿಣಾಮಗಳನ್ನು ಸಹ ಶೋಧಿಸುತ್ತಾರೆ.
📢 15 Apr 2026 Pod:India’s Middle Class Hits a Breaking Point (Grand Tamasha)
ಸೌರಭ್ ಮುಖರ್ಜಿ ಮತ್ತು ನಂದಿತ ರಾಜಹಂಸ ಅವರು ಬರೆದಿರುವ “ ಬ್ರೇಕ್ಪಾಯಿಂಟ್: ದಿ ಕ್ರೈಸಿಸ್ ಆಫ್ ದಿ ಮಿಡಲ್ ಕ್ಲಾಸ್ ಅಂಡ್ ದಿ ಫ್ಯೂಚರ್ ಆಫ್ ವರ್ಕ್” ಎಂಬ ಪುಸ್ತಕವನ್ನು ಆಧರಿಸಿ, ಈ ಇಬ್ಬರು ಲೇಖಕರ ಜೊತೆ ಮಿಲನ್ ವೈಷ್ಣವ್ ಅವರು ಈ ಸಂಚಿಕೆಯಲ್ಲಿ ಚರ್ಚಿಸಿದ್ದಾರೆ. ಭಾರತದ ಸರಿಸುಮಾರು 40 ಮಿಲಿಯನ್ ಆದಾಯ-ತೆರಿಗೆ ಪಾವತಿಸುವ ಕುಟುಂಬಗಳು ಉದ್ಯೋಗದ ಅಡಚಣೆಗಳು, ವೇತನ ನಿಶ್ಚಲತೆ ಮತ್ತು ಹೆಚ್ಚುತ್ತಿರುವ ಸಾಲದ ಕಾರಣದಿಂದಾಗಿ ತೀವ್ರ ಒತ್ತಡದಲ್ಲಿವೆ ಎಂದು ವಾದಿಸುತ್ತಾರೆ. ಮಧ್ಯಮ-ಕೌಶಲ್ಯದ ಉದ್ಯೋಗಗಳು ಇಲ್ಲವಾಗುತ್ತಿರುವುದು, ಶಿಕ್ಷಣ ವ್ಯವಸ್ಥೆಯಲ್ಲಿ ರಚನಾತ್ಮಕ ವೈಫಲ್ಯಗಳು ಇರುವುದು ಹಾಗೂ AI ಮತ್ತು ಯಾಂತ್ರೀಕರಣಗಳು ಆರ್ಥಿಕತೆಯನ್ನೇ ಮರುನಿರ್ಮಾಣ ಮಾಡುತ್ತಿರುವುದು ಇವೆಲ್ಲದರ ಕುರಿತು ಲೇಖಕರು ಚರ್ಚಿಸಿದ್ದಾರೆ. ಇದರಿಂದ ಮಧ್ಯಮ ವರ್ಗವು ಇನ್ನು ಮುಂದೆ ಭಾರತದ ಬೆಳವಣಿಗೆಯ ಪ್ರಾಥಮಿಕ ಎಂಜಿನ್ ಆಗಿರುವುದಿಲ್ಲ ಎಂದು ಸೂಚಿಸುತ್ತಾರೆ.
📢 16 Apr 2026 Pod: How the Iran War Is Shaping a Post-American World (The Foreign Affairs)
ಅತಿಥಿಗಳಾದ ಮಟಿಯಾಸ್ ಸ್ಪೆಕ್ಟರ್ ಮತ್ತು ಕಿಶೋರ್ ಮಹ್ಬುಬಾನಿ ಅವರು ಇರಾನ್ನ ಮೇಲಿನ ಯುಎಸ್ ಯುದ್ಧ ಮತ್ತು ಹೊರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಹೇಗೆ ಚಿಲಿ, ದಕ್ಷಿಣ ಕೊರಿಯಾದಂತಹ ಗಲ್ಫ್ ಸಂಘರ್ಷಕ್ಕೆ ಸಂಬಂಧನೇ ಪಡದ ರಾಷ್ಟ್ರಗಳ ಮೇಲೆ ಸಹ ಪರಿಣಾಮ ಬೀರುವಂತಹ ಜಾಗತಿಕ ಇಂಧನ ಬಿಕ್ಕಟ್ಟನ್ನು ಪ್ರಚೋದಿಸಿದೆ ಎಂದು ವಾದಿಸುತ್ತಾರೆ. ಇರಾನ್ ಮೇಲೆ ದಾಳಿ ಮಾಡುವ ವಾಷಿಂಗ್ಟನ್ ನಿರ್ಧಾರವು ಅಮೆರಿಕದ ಶಕ್ತಿ ಮತ್ತು ಅಂತರರಾಷ್ಟ್ರೀಯ ಪ್ರಭಾವದ ಅವನತಿಯನ್ನು ವೇಗಗೊಳಿಸುತ್ತಿದೆ ಎಂದು ಅವರು ವಾದಿಸುತ್ತಾರೆ. ಗೊತ್ತುಗುರಿಯಿಲ್ಲದ ಪ್ರೇರಣೆಗಳು ಮತ್ತು ಕಾರ್ಯಶೈಲಿ ಇವುಗಳಿಂದ ಜಗತ್ತು ಯುಎಸ್ ಹಿಡಿತದಿಂದ ಜಾರಿಕೊಳ್ಳುತ್ತಿದೆ ಎಂದು ಸೂಚಿಸುತ್ತಾರೆ.
📢 18 Apr 2026 Pod: U.S.-Iran talks stall: What it means for the Indian Ocean region (InFocus)
ಹಿಂದೂ ಮಹಾಸಾಗರ ಸಮ್ಮೇಳನದಿಂದ ವರದಿ ಮಾಡುತ್ತಾ, ಸುಹಾಸಿನಿ ಹೈದರ್ ಅವರು ಸ್ಥಗಿತಗೊಂಡ US-ಇರಾನ್ ಶಾಂತಿ ಮಾತುಕತೆಗಳಿಂದ ಈ ಪ್ರದೇಶದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಶೀಲಿಸುತ್ತಾರೆ. ಈ ಡೆಡ್ ಲಾಕ್ ನಿಂದ ಇಡೀ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಇಂಧನ ಶಕ್ತಿ, ವ್ಯಾಪಾರ, ಭದ್ರತೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಡಚಣೆಗಳಾಗುವುದನ್ನು ಅವರು ಗಮನಿಸುತ್ತಾರೆ. ಭಾರತ ಮತ್ತು ನೆರೆಹೊರೆಯ ರಾಷ್ಟ್ರಗಳು ಒಂದು ಸಂಕೀರ್ಣ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಪರಿಸ್ಥಿತಿಯನ್ನು ಇದು ನಿರ್ಮಿಸುತ್ತದೆ.
📢 15 Apr 2026 Pod: Justice Kurian Joseph Committee Report explained: what are its recommendations (InFocus by The Hindu)
ಕೇಂದ್ರ-ರಾಜ್ಯ ಸಂಬಂಧಗಳನ್ನು ಅಧ್ಯಯನ ಮಾಡಲು ಡಿಎಂಕೆ ಸರ್ಕಾರವು ನೇಮಿಸಿದ ಸಮಿತಿಯ ಕುರಿತು ವಿವರಣೆ ಇದೆ. ಸಮಿತಿಯ ಸದಸ್ಯರಾಗಿದ್ದ ಅಶೋಕ್ ವರ್ಧನ್ ಶೆಟ್ಟಿ ಅವರು ವಿಕೇಂದ್ರೀಕರಣ, ರಾಜ್ಯ ಸ್ವಾಯತ್ತತೆ ಮತ್ತು ಫೆಡರಲಿಸಂ ಇತ್ಯಾದಿ ವಿಚಾರಗಳ ಕುರಿತು ತಮಿಳುನಾಡಿನ ದೀರ್ಘಕಾಲದ ಕಳವಳಗಳ ಪರಿಹಾರದ ಕುರಿತು ವರದಿಯಲ್ಲಿರುವ ಶಿಫಾರಸುಗಳನ್ನು ಚರ್ಚಿಸುತ್ತಾರೆ. 1969 ರಷ್ಟು ಹಿಂದಿನಿಂದಲೂ ರಾಜ್ಯದಲ್ಲಿ ಇಂತಹ ಪ್ರಶ್ನೆಗಳನ್ನು ಎತ್ತಲಾಗಿದೆ.