📹 10 Apr 2026 Video: Did Donald Trump ‘lose’ the war? Could he now ‘lose’ the peace? (The Wire)
ಆರ್ಥಿಕ ತಜ್ಞ ಮಾರ್ಟಿನ್ ವುಲ್ಫ್ ಪ್ರಕಾರ, ಯುಎಸ್ ಮಿಲಿಟರಿ ಕ್ರಮದ ಹೊರತಾಗಿಯೂ ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಮೂಲಕ ಇರಾನ್ ವ್ಯೂಹಾತ್ಮಕವಾಗಿ ಪ್ರಬಲವಾಗಿದೆ. ವುಲ್ಫ್ ಟ್ರಂಪ್ರ ನಾಯಕತ್ವವನ್ನು ಅನಿಯಮಿತ ಮತ್ತು ಅನೈತಿಕ ಎಂದು ಟೀಕಿಸುತ್ತಾರೆ. ಯುದ್ಧವು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸಿದೆ ಮತ್ತು ಸ್ಥಗಿತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
📹 11 Apr 2026 Video: 91 Lakh Voters DELETED! | Reality of West Bengal Elections (Dhruv Rathee)
ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಎಂಬ ದೋಷಪೂರಿತ ಸಾಫ್ಟ್ವೇರ್-ಚಾಲಿತ ಪ್ರಕ್ರಿಯೆಯಿಂದ ಪಶ್ಚಿಮ ಬಂಗಾಳದಲ್ಲಿ ಉಂಟಾದ ಮತದಾರರ ಅಮಾನ್ಯೀಕರಣದ ಬಿಕ್ಕಟ್ಟನ್ನು ಈ ವೀಡಿಯೊ ವಿವರಿಸುತ್ತದೆ. 61 ಲಕ್ಷ ಮತದಾರರನ್ನು ಹೇಗೆ ಅಳಿಸಲಾಗಿದೆ ಮತ್ತು ಮಿಲಿಯನ್ಗಟ್ಟಲೆ ಜನರನ್ನು “ಶಂಕಿತರು” ಎಂದು ಗುರುತಿಸಲಾಗಿದೆ, ನಿರ್ದಿಷ್ಟ ಜನವರ್ಗವನ್ನು ಮತ್ತು ಮುಸ್ಲಿಂ-ಬಹುಸಂಖ್ಯಾತ ಪ್ರದೇಶಗಳನ್ನು ಪಾರದರ್ಶಕವಲ್ಲದ ವ್ಯವಸ್ಥೆಯ ಮೂಲಕ ಗುರಿಪಡಿಸಲಾಗಿದೆ ಎಂಬುದನ್ನು ಧ್ರುವ್ ರಥಿ ಅವರು ಹೈಲೈಟ್ ಮಾಡಿದ್ದಾರೆ.
📢 06 Apr 2026 Pod: Trump’s Iran Deadline: Will They Call His Bluff? (The Rest Is Politics: US)
ಕ್ಯಾಟಿ ಕೇ ಮತ್ತು ಆಂಥೋನಿ ಸ್ಕಾರಮುಚಿ ಅವರು ಡೊನಾಲ್ಡ್ ಟ್ರಂಪ್ ಅವರ ಡೆಡ್ಲೈನ್ಗಳು ಮತ್ತು ಇರಾನ್ ವಿರುದ್ಧ ಅವರ ಬೆದರಿಕೆಗಳನ್ನು ವಿಶ್ಲೇಷಿಸುತ್ತಾರೆ. ಈ ಬೆದರಿಕೆಗಳು ಕೇವಲ ತೋರಿಕೆಗಾಗಿ ಮತ್ತು ರಾಜಕೀಯ ಕಾರಣಕ್ಕಾಗಿ ಇವೆಯೇ ಅಥವಾ ಗಂಭೀರವಾಗಿವೆಯೇ ಎಂದು ಪ್ರಶ್ನಿಸುತ್ತಾರೆ. ಚರ್ಚೆಯು ಹೊರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಒಳಗೊಂಡಿದೆ. ಹಾಗೂ ದುರ್ಬಲರಾಗಿ ಕಾಣಿಸಿಕೊಳ್ಳದೇ ಈ ಸಂದಿಗ್ಧ ಸ್ಥಿತಿಯಿಂದ ಪಾರಾಗುವ ಅಧ್ಯಕ್ಷ ಟ್ರಂಪ್ ರ ಪ್ರಯತ್ನದ ಕುರಿತಾಗಿದೆ.
📢 09 Apr 2026 Pod: An Iran Hawk’s Take on the Cease-Fire (Foreign Policy Live)
ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಮಧ್ಯಪ್ರಾಚ್ಯದಲ್ಲಿ ಅಮೆರಿಕವು ತನ್ನ ಮಿಲಿಟರಿ ಮೇಲುಗೈ ಯನ್ನು ಬಳಸಿಕೊಂಡು ಸಾಗರ ಮಾರ್ಗದ ವ್ಯಾಪಾರ ಮಾರ್ಗಗಳನ್ನು ಭದ್ರತಡಿಸುವುದರ ಜೊತೆಗೆ ಇರಾನಿನ ಸರ್ಕಾರವನ್ನು ಸಹ ಕಿತ್ತು ಹಾಕಬೇಕಿತ್ತು ಎಂದು ವಾದಿಸುತ್ತಾರೆ. ಅವೆರಡನ್ನೂ ಮಾಡದಿದ್ದರೆ ಅಮೆರಿಕದ ವಿಶ್ವಾಸಾರ್ಹತೆ ಮತ್ತು ಭದ್ರತೆ ಎರಡಕ್ಕೂ ಧಕ್ಕೆ ಆಗುವುದೆಂದು ಪ್ರಸ್ತುತ ಕದನ ವಿರಾಮದ ದುರ್ಬಲತೆಯನ್ನು ಮತ್ತು ಸಂಘರ್ಷದಿಂದ ಉಂಟಾದ ದೀರ್ಘಕಾಲೀನ ಜಾಗತಿಕ ಆರ್ಥಿಕ ಹಾನಿಯನ್ನು ಸಹ ಈ ಸಂವಾದವು ಪರಿಶೀಲಿಸುತ್ತದೆ.
📢 09 Apr 2026 Pod: Have elections in India become plutocratic? (In Focus by The Hindu)
ಭಾರತೀಯ ರಾಜಕೀಯದಲ್ಲಿ ಹೆಚ್ಚುತ್ತಿರುವ ಹಣದ ಪಾತ್ರವನ್ನು ಈ ಪಾಡ್ ಕಾಸ್ಟ್ ನಲ್ಲಿ ಚರ್ಚಿಸಲಾಗಿದೆ. 93% ರಷ್ಟು ಸಂಸತ್ ಸದಸ್ಯರು ಕೋಟ್ಯಧೀಶರಿದ್ದಾರೆ. ದುಬಾರಿ ಹಣ ಖರ್ಚು ಮಾಡುವ ಪ್ರಚಾರಗಳು ಅಸಮಾನ ಸ್ಪರ್ಧೆಯನ್ನು ಸೃಷ್ಟಿಸುವುದು , ಸ್ವತಂತ್ರ ಅಭ್ಯರ್ಥಿಗಳು ಮತ್ತು ಸಣ್ಣ ಪಕ್ಷಗಳಿಗೆ ಸ್ಪರ್ಧಿಸಲು ಕಷ್ಟವಾಗುವುದು ಮುಂತಾದ ವಿಚಾರಗಳನ್ನು ಚರ್ಚಿಸಲಾಗಿದೆ.