📹 20 March 2026 Vid: India’s Iran-US/Israel Strategy Has Fallen Apart, We’ve got Ourselves in a Mess (The Wire Talks)
ಮಾಜಿ ರಾಜತಾಂತ್ರಿಕ ತಲ್ಮಿಜ್ ಅಹ್ಮದ್ ಅವರು ಇರಾನ್-ಯುಎಸ್-ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ “ಅತ್ಯಂತ ನಿರಾಶಾದಾಯಕ” ವಿದೇಶಾಂಗ ನೀತಿಯನ್ನು ಟೀಕಿಸುತ್ತಾರೆ. ಇಸ್ರೇಲ್ನೊಂದಿಗೆ “ಭಾವನಾತ್ಮಕ ಬಾಂಧವ್ಯ” ದ ಕಾರಣದಿಂದ ತಾನು ಅನುಸರಿಸುತ್ತಿದ್ದ ತನ್ನ ವಿದೇಶ ನೀತಿಯ ಕಾರ್ಯತಂತ್ರದ ಅಸ್ಪಷ್ಟತೆಯನ್ನು ಭಾರತ ಕೈಬಿಟ್ಟಿದೆ ಎಂದು ಅವರು ವಾದಿಸುತ್ತಾರೆ. ಇದು ಇರಾನ್ನೊಂದಿಗೆ ಅದರ ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮತ್ತು ನಾಗರಿಕತೆಯ ಸ್ತರದ ಸಂಬಂಧಗಳನ್ನು ಹಾನಿಗೊಳಿಸುವ ಸಂಭಾವ್ಯತೆಯನ್ನು ಗಮನಿಸುತ್ತಾರೆ.
📹 19 March 2026 Vid: Iran Is Playing the Long Game: What to Expect from Protracted War in Middle East (Democracy Now!)
ಇರಾನಿನ ಅನಿಲ ಕ್ಷೇತ್ರಗಳ ಮೇಲೆ ಇಸ್ರೇಲ್ನ ಬಾಂಬ್ ದಾಳಿಯ ನಂತರ ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಆದ ಉಲ್ಬಣವನ್ನು ಈ ಮಾತುಕತೆಯಲ್ಲಿ ಪರಿಶೋಧಿಸಲಾಗಿದೆ. ಪ್ರೊಫೆಸರ್ ವಲಿ ನಾಸೆರ್ ಇರಾನ್ನ “ಲಾಂಗ್ ಗೇಮ್” ತಂತ್ರವನ್ನು ವಿವರಿಸುತ್ತಾರೆ. ಯಾವುದೇ ಒಬ್ಬ ನಾಯಕನ ಹತ್ಯೆಯಾದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಆಡಳಿತದ ರಚನೆಯನ್ನು ಬಳಸಿಕೊಳ್ಳುವಂತೆ ರೂಪುಗೊಳಿಸಲಾದ ‘ಮೊಸಾಯಿಕ್ ಮಿಲಿಟರಿ’ ಬಗ್ಗೆ ಹೇಳುತ್ತಾರೆ. ಇಸ್ರೇಲ್ ಮತ್ತು ಅಮೆರಿಕಗಳು ತನ್ನ ಮೇಲೆ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಇರಾನ್ ಸಹ ಗಲ್ಫ್ನಲ್ಲಿ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ರೀತಿ ವಿಶ್ವದ ಆರ್ಥಿಕತೆಯ ಮೇಲೆ ಪರೋಕ್ಷ ಸಮರವನ್ನು ಮುಂದುವರಿಸುತ್ತ ಯುಎಸ್ ಮತ್ತು ಇಸ್ರೇಲಿನ ರಕ್ಷಣಾ ಬಲವನ್ನು ಕುಂದಿಸುವ ಲೆಕ್ಕಾಚಾರದಲ್ಲಿದೆ.
📢21 March 2026 Pod: West Asia conflict: Under what conditions would Iran agree to a ceasefire? (InFocus by The Hindu)
ಪ್ರೊಫೆಸರ್ ರಜ್ಮಹಂಗ್ ಅವರು ಯುದ್ಧದ ಕುರಿತು ಇರಾನಿನ ದೃಷ್ಟಿಕೋನವನ್ನು ಒದಗಿಸುತ್ತಾರೆ, ನಾಗರಿಕ ಮೂಲಸೌಕರ್ಯಗಳ ಮೇಲಿನ ನಿರಂತರ ದಾಳಿಯ ವಿರುದ್ಧ ಇರಾನಿನ ಉಳಿವಿಗಾಗಿ ಹೋರಾಟ ಎಂದು ರೂಪಿಸುತ್ತಾರೆ. ಯಾವ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಇರಾನ್ ಕದನ ವಿರಾಮಕ್ಕೆ ಒಪ್ಪಬಹುದೆಂಬುದನ್ನು ಈ ಪಾಡ್ಕ್ಯಾಸ್ಟ್ ಪರಿಶೋಧಿಸುತ್ತದೆ. ಮತ್ತು ಹಾರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಭಾರತವು ಹೇಗೆ ನಿಭಾಯಿಸಬಹುದು ಎನ್ನುವುದನ್ನು ಸಹ.
📢19 March 2026 Pod: How Strong are Iran’s Strongmen (The Foreign Affairs Interview)
ಇತಿಹಾಸಕಾರ ಸ್ಟೀಫನ್ ಕೋಟ್ಕಿನ್ ಇರಾನಿನ ಆಡಳಿತದ ರೆಸಿಲಿಯನ್ಸ್ ಅನ್ನು ವಿಶ್ಲೇಷಿಸುತ್ತಾರೆ. ಯುಎಸ್ ಮತ್ತು ಇಸ್ರೇಲ್ ನಿರೀಕ್ಷಿಸಿದಂತೆ ಇರಾನ್ ತ್ವರಿತ ಕುಸಿತವನ್ನು ಕಾಣದಿದ್ದನ್ನು ಗಮನಿಸುತ್ತಾರೆ. ಸರ್ವಾಧಿಕಾರಿ ವ್ಯವಸ್ಥೆಗಳು ಅಂತರ್ಗತವಾದ ದೌರ್ಬಲ್ಯಗಳನ್ನು ಹೊಂದಿದ್ದರೂ, ಇಸ್ಲಾಮಿಕ್ ಗಣರಾಜ್ಯವು ಗಟ್ಟಿಯಾಗಿ ಉಳಿದಿದೆ ಎಂದು ಅವರು ವಾದಿಸುತ್ತಾರೆ. ಮತ್ತು ಆಡಳಿತ ಬದಲಾವಣೆಯ ಪ್ರಸ್ತುತ ಪ್ರಯತ್ನಗಳನ್ನು ಇತಿಹಾಸದ ಆಧಾರದಲ್ಲಿ ಹೇಗೆ ನೋಡಬಹುದು ಎಂಬುದನ್ನು ಅವರು ಪರಿಶೀಲಿಸುತ್ತಾರೆ.
📢17 March 2026 Pod: Trump Desperate for Strait Allies (Pod Save America)
ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ನೌಕಾ ಕಾರ್ಯಾಚರಣೆಗಾಗಿ ಟ್ರಂಪ್ ಅವರು ಮಿತ್ರರಾಷ್ಟ್ರಗಳನ್ನು ಒಂದುಗೂಡಿಸುವಲ್ಲಿ ವಿಫಲವಾದ ಕುರಿತು ಪಾಡ್ಕಾಸ್ಟ್ ನಲ್ಲಿ ಚರ್ಚಿಸುತ್ತಾರೆ. ಚರ್ಚೆಯು ಇರಾನ್ ಯುದ್ಧದ ವರದಿಗೆ ಸಂಬಂಧಿಸಿದಂತೆ ಟ್ರಂಪ್ ಆಡಳಿತವು ಮಾಧ್ಯಮಗಳ ವಿರುದ್ಧ ಬೆದರಿಕೆಗಳನ್ನು ಒಡ್ಡುತ್ತಿರುವುದು ಮತ್ತು ಆಡಳಿತದೊಳಗೆ ಭ್ರಷ್ಟಾಚಾರ ಹೆಚ್ಚುತ್ತಿರುವುದನ್ನು ಸಹ ಒಳಗೊಂಡಿದೆ.
📢16 March 2026 Pod: US-Israeli war on Iran: Will Trump escalate or exit? (InFocus by The Hindu)
ಸಂಘರ್ಷವು ಮೂರನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ವಿಸ್ತರಿಸುತ್ತಿರುವ ಅಪಾಯಗ ಳು ಮತ್ತು ಹೆಚ್ಚುತ್ತಿರುವ ಸಾವುನೋವುಗಳನ್ನು ಪಾಡ್ಕಾಸ್ಟ್ ಪರಿಶೀಲಿಸುತ್ತದೆ. ಅಧ್ಯಕ್ಷ ಟ್ರಂಪ್ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಲು ಆಯ್ಕೆ ಮಾಡುತ್ತಾರೆಯೇ ಅಥವಾ ಅಮೆರಿಕನ್ ಪಡೆಗಳು ಹೆಚ್ಚು ದಾಳಿಗಳಿಗೆ ಗುರಿಯಾಗುತ್ತಿದ್ದಂತೆ ನಿರ್ಗಮನ ತಂತ್ರವನ್ನು ಹುಡುಕುತ್ತಾರೆಯೇ ಎಂಬುದನ್ನು ಇದು ಚರ್ಚಿಸುತ್ತದೆ.
📹 18 March 2026 Vid: Transgender Amendment Bill 2026 sparks fears of erasure and barriers, says trans masc writer Radz (South First)
2026 ರ ತಿದ್ದುಪಡಿ ಮಸೂದೆಯು ಟ್ರಾನ್ಸ್ಜೆಂಡರ್ ಗುರುತನ್ನು ಕೇವಲ ನಾಲ್ಕು ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳನ್ನು ಒಳಗೊಳ್ಳುವಂತೆ ಸಂಕುಚಿತವಾಗಿ ಮರುವ್ಯಾಖ್ಯಾನಿಸುತ್ತದೆ ಮತ್ತು ಆ ಮೂಲಕ ಈ ವರ್ಗಗಳಿಗೆ ಹೊಂದಿಕೆಯಾಗದವರನ್ನು ಅಳಿಸಿಹಾಕುತ್ತದೆ ಎಂಬುದನ್ನು ಟ್ರಾನ್ಸ್ ಬರಹಗಾರರಾದ ರಾಡ್ಜ್ ವಿವರಿಸುತ್ತಾರೆ. ದೈಹಿಕ ಸ್ವಾಯತ್ತತೆಯನ್ನು ತೆಗೆದುಹಾಕುವ ಅವಮಾನಕರ ಐದು-ಹಂತದ ಪರಿಶೀಲನೆ ಪ್ರಕ್ರಿಯೆಯನ್ನು ಅವರು ವಿವರವಾಗಿ ವಿವರಿಸುತ್ತಾರೆ. ಮತ್ತು ಮಸೂದೆಯು ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಸುರಕ್ಷಿತ ಸ್ಥಳಗಳನ್ನು ಒದಗಿಸುವವರನ್ನು ಅಪರಾಧೀಕರಿಸಬಹುದು ಎಂದು ಗಮನಿಸುತ್ತಾರೆ.
📹 17 March 2026 Vid: India’s transgender community under threat? The Prime Time That Wasn’t (Peek TV)
ಅತಿಥಿಗಳಾದ ರಾಗವಿ ಮತ್ತು ಜೆನಾಬ್ ಅವರು Transgender Persons Amendment Bill 2026 (ಟ್ರಾನ್ಸ್ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ 2026) ಅನ್ನು ಟೀಕಿಸುತ್ತಾರೆ. ಇದು ಟ್ರಾನ್ಸ್ ಸಮುದಾಯಕ್ಕೆ “ಅಸ್ತಿತ್ವದ ಬೆದರಿಕೆ” ಎಂದು ವಿವರಿಸುತ್ತಾರೆ. ಸ್ವಯಂ-ಗುರುತಿಸುವಿಕೆಯಿಂದ ‘ವೈದ್ಯಕೀಯ ಪ್ರಮಾಣೀಕರಣ ಮಾದರಿ’ಗೆ ಬದಲಾಯಿಸಿರುವುದು ಜೀವಂತ ವಾಸ್ತವವನ್ನು ನಿರ್ಲಕ್ಷಿಸಿದಂತೆ ಎಂದು ವಾದಿಸುತ್ತಾರೆ. ‘ಟ್ರಾನ್ಸ್ ಮೆನ್’, ‘ಬೈನರಿ-ಅಲ್ಲದವರು’ ಹೀಗೆ ವೈವಿಧ್ಯಮಯ ಗುರುತುಗಳನ್ನು ಅಳಿಸಿಹಾಕುವುದೆಂದೂ ಮತ್ತು ಆರೋಗ್ಯಸೇವೆಯನ್ನು ರಾಜ್ಯದ ಕಣ್ಗಾವಲು ಸಾಧನವಾಗಿ ಪರಿವರ್ತಿಸುತ್ತದೆ ಎಂದೂ ಅವರು ವಾದಿಸುತ್ತಾರೆ.
📢20 March 2026 Pod: Why was the National Transgender Council kept in the dark about the 2026 Amendment Bil? (InFocus)
2026 ರ ತಿದ್ದುಪಡಿ ಮಸೂದೆಯನ್ನು ರಚಿಸುವಾಗ ಕೇಂದ್ರ ಸರ್ಕಾರವು National Council for Transgender Persons (ಟ್ರಾನ್ಸ್ಜೆಂಡರ್ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿ)ಯನ್ನು ಸಂಪರ್ಕಿಸಲು ವಿಫಲವಾಗಿದೆ ಎಂದು ಕಲ್ಕಿ ಸುಬ್ರಮಣ್ಯಂ ಬಹಿರಂಗಪಡಿಸಿದ್ದಾರೆ. ಕಡ್ಡಾಯ ವೈದ್ಯಕೀಯ ಪರೀಕ್ಷೆಗಳು, ನಿಯಮ ಮೀರುವವರಿಗೆ ವಿಧಿಸಲಾಗುವ ಶಿಕ್ಷೆಯ ಅಸಮಾನ ಅನುಪಾತ ಇವನ್ನು ಪ್ರಸ್ತಾಪಿಸುತ್ತಾ ಈ ಪ್ರತಿಗಾಮಿ ಬದಲಾವಣೆಗಳನ್ನು ಜಾರಿಗೆ ತಂದರೆ ತಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳುತ್ತಾರೆ.
📹 18 March 2026 Vid: Can science in India be a dream job? (Frontline Magazine)
ಡಾ. ಕೌಶಿಕ್ ಅವರು ತಮ್ಮ ಪುಸ್ತಕ, ದಿ ರಿಯಲ್ ಡೀಲ್ ಕುರಿತು ಚರ್ಚಿಸಿದ್ದಾರೆ, ಇದು ಭಾರತದಲ್ಲಿನ ವೈಜ್ಞಾನಿಕ ವೃತ್ತಿಜೀವನದ ವಾಸ್ತವತೆಯ ಒಂದು ಪ್ರಾಮಾಣಿಕ ನೋಟವನ್ನು ನೀಡುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಸಂಬಂಧಪಟ್ಟಂತೆ. ಅವರು STEM (Science Technology Engineering Management) ಕ್ಷೇತ್ರಗಳಲ್ಲಿ ಸಂಬಂಧಪಟ್ಟಂತೆ ಮಹಿಳೆಯರು ಎದುರಿಸುವ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಭಾರತವು ಉತ್ತಮವಾದ ಹೆರಿಗೆ ರಜೆ ನೀತಿಗಳನ್ನು ಹೊಂದಿದ್ದರೂ, ಸಾಮಾನ್ಯವಾಗಿ ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆ, ಸಾಂಸ್ಥಿಕ ಅಧಿಕಾರಶಾಹಿ ಮುಂತಾದವು ಮಹಿಳೆಯರಿಗೆ ಸಂಶೋಧನೆಯ ಸಂತೋಷವನ್ನು ಕುಗ್ಗಿಸುತ್ತವೆ.