ಉದ್ದೀಪನ ಮದ್ದು ಸೇವನೆ - ಕ್ರೀಡಾ ಸ್ಫೂರ್ತಿಗೆ ಅಪಚಾರ
·
ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಈಜುಪಟು ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿ ಬಿದ್ದಿರುವ ವರದಿ "ಡೋಪಿಂಗ್ ಪಿಡುಗಿಗೆ ಮದ್ದು ಅರೆಯುವ ಕಾಲ" ಎಂಬ ಹೆಸರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು ಓದಿದೆ. ಈಚಿನ ವರ್ಷಗಳಲ್ಲಿ ಕ್ರೀಡಾ ಲೋಕದಲ್ಲಿ ತಲೆದೋರಿರುವ ಅಸಮ್ಮತ ಬೆಳವಣಿಗೆಯಿದು. ೧೯೮೮ರಲ್ಲಿ ಸಿಯೋಲ್ ಒಲಂಪಿಕ್ಸ್ ನಲ್ಲಿ ಅಮೇರಿಕಾದ ಕಾರ್ಲ್ ಲೂಯಿಸ್ ನನ್ನ ಸೋಲಿಸಿ ಕೆನಡಾ ದ ಬೆನ್ ಜಾನ್…
